ಆಗಮ ಪ್ರವೀಣ ಪರೀಕ್ಷೆಗಳಿಗೆ ( 2024 - 2025 ) ಅವೇದನೆ ಸಲ್ಲಿಸಿ

ಈ ಕಾಲೇಜಿನಲ್ಲಿರುವ ಎಲ್ಲಾ ವಿಭಾಗಗಳ ಹೆಸರು ಮುಂದಿನಂತಿವೆ- ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ, ನವೀನನ್ಯಾಯಶಾಸ್ತ್ರ, ಪೂರ್ವಮೀಮಾಂಸಾ ಶಾಸ್ತ್ರ, ಧರ್ಮಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ದೈತವೇದಾಂತ, ಆದೈತವೇದಾಂತ, ವಿಶಿಷ್ಟಾತವೇದಾಂತ, ಶಕ್ತಿವಿಶಿಷ್ಟಾದ್ವತವೇದಾಂತ, ಋಗ್ವೇದ, ಕೃಷ್ಣಯಜುರ್ವೇದ, ಶುಕ್ಲಯಜುರ್ವೇದ ಹಾಗೂ ಸಾಮವೇದ. ಇದೇ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಗಮ ಶಿಕ್ಷಣವೂ ನಡೆಯುತ್ತಿದೆ.

ಶ್ರೀಮನ್ಮಹಾರಾಜ ಸಂಸ್ಕೃತ ಕಾಲೇಜಿನ ಸಂಕ್ಷಿಪ್ತ ಇತಿಹಾಸ

ಪಾಠಶಾಲೋದಯ

ಮೂರನೆಯ ಕೃಷ್ಣರಾಜ ಒಡೆಯರ ಮಹಾರಾಜರವರ ದೂರದೃಷ್ಟಿಯಿಂದ ಶ್ರೀಮನ್ಮಹಾರಾಜ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವ ಪ್ರಯತ್ನ ಮೊದಲಾಯಿತು. ಇದಕ್ಕಾಗಿ ಮಹಾರಾಜರವರು ಒಂದು ಸಾವಿರ ರೂಪಾಯಿಗಳನ್ನು ಮೀಸಲಿಟ್ಟಿದ್ದರು. ಆದರೆ ಅವರ ಆಡಳಿತದಲ್ಲಿ ಪಾಠಶಾಲೆಯು ಪ್ರಾರಂಭವಾಗಲಿಲ್ಲ. ಈ ಸಂಕಲ್ಪ ವಿಫಲವೂ ಆಗಲಿಲ್ಲ. ದುರದೃಷ್ಟವಶಾತ್ 1868 ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ರವರು ದಿವಂಗತರಾದರು. ರಾಜೇಂದ್ರರ ಆಡಳಿತದಲ್ಲಿ ರಾಜ ಪ್ರಾಸಾದಮಂತ್ರಿಗಳಾದ ರಂಗಾಚಾರ್ಯರು ಮಹಾರಾಜರ ಸಂಕಲ್ಪವನ್ನು ಸ್ಮರಿಸಿಕೊಂಡು ಪಾಠಶಾಲೆಯನ್ನು ಸಂಸ್ಥಾಪಿಸಿದರು. ಅನ್ನಸತ್ರಕ್ಕಾಗಿ ಮೀಸಲಿಟ್ಟ ನಿಧಿಯು ಇರುವುದನ್ನು ಗಮನಿಸಿ ಇದರ ಸದುಪಯೋಗವನ್ನು ಮಾಡುವ ದೃಷ್ಟಿಯಿಂದ ‘ಸರಸ್ವತೀ ಪ್ರಾಸಾದ’ ಎಂಬ ಹೆಸರಿನಿಂದ ಈ ಪಾಠಶಾಲೆಯು ಉದಯವಾಯಿತು.

ಆರಂಭ ದೆಸೆ

ಮೊದಲು ತರ್ಕಶಾಸ್ತ್ರ ಹಾಗು ವ್ಯಾಕರಣ ಶಾಸ್ತ್ರದ ಆಮೂಲಾಗ್ರ ಅಧ್ಯಯನಕ್ಕಾಗಿ ಇಬ್ಬರು ಉಪಾಧ್ಯಾಯರನ್ನು 1868 ರಲ್ಲಿ ನಿಯಮಿಸಲಾಯಿತು. ಆಮೇಲೆ ಋಗ್ವದ ಹಾಗೂ ಯಜುರ್ವೇದ ಅಧ್ಯಾಪನಕ್ಕೆ ಅವಕಾಶ ಮಾಡಿಕೊಡಲಾಯಿತು. ಮೊದಲು ಮೂವತ್ತರಿಂದ ನಲವತ್ತು ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬಂದಿದ್ದರು. ಮೂರನೇ ಕೃಷ್ಣರಾಜ ಒಡೆಯರವರ ಹೆಸರಿನಲ್ಲಿಯೇ ಸ್ಥಾಪಿತವಾದ ಅನ್ನಸತ್ರಶಾಲೆಯಲ್ಲಿಯೇ ಮುಂದೆ 1878ರಲ್ಲಿ ಅಧಿಕೃತವಾಗಿ ಪಾಠಶಾಲೆ ಪ್ರಾರಂಭವಾಯಿತು. ಐವತ್ತು ವರ್ಷಗಳಲ್ಲಿ ಈ ಪಾಠಶಾಲೆಯು ಪದಿನಾಲ್ಕು ವಿದ್ಯೆಗಳಲ್ಲಿ ಪರಿಣತರಾದ ಪಂಡಿತರನ್ನು ಹೊಂದಿ 285 ವಿದ್ಯಾರ್ಥಿಗಳಿಗೆ ಅಧ್ಯಯನದ ಸೌಕರ್ಯವನ್ನು ನೀಡುವ ಸಾಮರ್ಥವನ್ನು ಪಡೆಯಿತು. 1918ರಲ್ಲಿ ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕಾಗಿ 120 ಜನ ವಿದ್ಯಾರ್ಥಿಗಳಿಗೆ ವಾಸಿಸಲು ಅನುಕೂಲವಾಗುವಂತೆ ಸುಸಜ್ಜಿತವಾದ ಕೊಠಡಿಗಳನ್ನು ನಿರ್ಮಿಸಲಾಯಿತು.

ಬೆಳವಣಿಗೆ

ಆರಂಭ ದೆಸೆಯಲ್ಲಿ ಋಗ್ವದ, ಯಜುರ್ವೇದ, ತರ್ಕ, ವ್ಯಾಕರಣ ಅಧ್ಯಯನಕ್ಕೆ ಈ ಪಾಠಶಾಲೆಯಲ್ಲಿ ಅವಕಾಶವಿತ್ತು.

    • 1883ರಲ್ಲಿ ಸಾಮವೇದ, ವೇದಭಾಷ್ಯ, ಧರ್ಮಶಾಸ್ತ್ರ, ಜ್ಯೋತಿಷ, ಸಂಗೀತ ಹಾಗೂ ವೈದ್ಯಶಾಸ್ತ್ರಗಳ ಆಮೂಲಾಗ್ರ ಅಧ್ಯಯನಕ್ಕೆ ಅವಕಾಶ
      ಮಾಡಿಕೊಡಲಾಯಿತು.
    • 1884 ರಿಂದ ಪೂರ್ವಮೀಮಾಂಸಾ ಶಾಸ್ತ್ರಾಧ್ಯಯನಕ್ಕೆ ಅವಕಾಶ ನೀಡಲಾಯಿತು. ಸಂಗೀತ ಹಾಗೂ ವೈದ್ಯಶಾಸ್ತ್ರ ಆಧ್ಯಯನಕ್ಕೆ ಈ ಪಾಠಶಾಲೆಯಲ್ಲಿ ಅವಕಾಶ ನೀಡಿದ ವಿಶೇಷ ವ್ಯವಸ್ಥೆ ಗಮನಾರ್ಹವಾಗಿತ್ತು.
    • 1890 ರಲ್ಲಿ ಅಧ್ಯಯನದ ಕ್ರಮದ ಬಗ್ಗೆ ವಿಮರ್ಶೆ ನಡೆದು ಪ್ರೌಢಿಮೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರೌಢವಿದ್ಯಾರ್ಥಿಗಳು ಉಪನಿಷತ್ ಹಾಗೂ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕೆಂದು ಕಡ್ಡಾಯ ಮಾಡಲಾಯಿತು. ಪ್ರಾಥಮಿಕ ವಿದ್ಯಾರ್ಥಿಗಳು ವೇದಮಂತ್ರವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕೆಂದು ನಿಯಮವನ್ನು ವಿಧಿಸಲಾಯಿತು. ಪಾಠ್ಯಕ್ರಮದಲ್ಲಿ ಗಣನೀಯ ವ್ಯತ್ಯಾಸ ಮಾಡದೇ 1917ರ ವರೆಗು ಒಂದೇ ರೀತಿಯ ಪಠ್ಯಕ್ರಮವನ್ನು ಮುಂದುವರಿಸಲಾಯಿತು ಪಠ್ಯಕ್ರಮವನ್ನು ಪರಿಷ್ಕರಿಸುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ತನ್ನ ವರದಿಯಲ್ಲಿ ಮೈಸೂರು ಮತ್ತು ಬೆಂಗಳೂರು ಕಾಲೇಜ್ ಜೊತೆಗೆ ಕರ್ನಾಟಕ ರಾಜ್ಯಾದ್ಯಂತ ಸ್ಥಾಪಿತವಾಗಿರುವ 35 ಅನುದಾನಿತ ಶಾಲೆಗಳನ್ನು ಏಕರೀತಿಯ ಹಾಗೂ ಒಂದೇ ಮಟ್ಟದ ಶಿಕ್ಷಣಕ್ಕೆ ಒಳಪಡಿಸುವಂತೆ ಸೂಚಿಸಿತು ಹಾಗೂ ಸ್ನಾತಕೋತ್ತರ ಪದವಿಗೆ ಸರಿಸಮವಾದ ವಿದ್ವತ್ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿತು. ಹಾಗೂ ಇಲ್ಲಿನ ಶಿಕ್ಷಣದ ಮಟ್ಟವು ಕುಸಿಯದಂತೆ ತಲಸ್ಪರ್ಶಿ ವಿದ್ವತ್ತನ್ನು ಪಡೆಯಲನುವಾಗುವ ದೃಷ್ಟಿಯಿಂದ ಸುವ್ಯವಸ್ಥಿತ ಪರೀಕ್ಷೆ ನಡೆಸಲು ಒಂದು ಪರೀಕ್ಷಾಮಂಡಳಿಯನ್ನು ರಚಿಸಲು ಸೂಚಿಸಿ ಅದರ ಮೂಲಕ ಪರೀಕ್ಷೆ ನಡೆಸುತ್ತಿತ್ತು ಮತ್ತು ಅದರಂತೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾಗುವವರೆಗೆ ಈ ವ್ಯವಸ್ಥೆಯು ಇತ್ತು.

ಆಗಮ ಪ್ರಸಿದ್ಧ ಪರೀಕ್ಷೆಗಳು

Watch Now

 © 2025 Agama Education| All Rights Reserved | Powered by World Vision Softek

Apply | Privacy Policy | Terms of Use